ಗ್ರೀನಿಜ್ ಮಾಧ್ಯ ಕಾಲ

ಮಾಧ್ಯ ಸೂರ್ಯ ಗ್ರೀನಿಜ್ ಮಧ್ಯಾಹ್ನರೇಖೆಯನ್ನು ಪೂರ್ವವಲಯದಿಂದ ಪಶ್ಚಿಮ ವಲಯಕ್ಕೆ ದಾಟುವ ಮುಹೂರ್ತದಿಂದ ಆರಂಭಿಸಿ ಅಳೆಯುವ ಕಾಲ (ಗ್ರೀನಿಜ್ ಮೀನ್ ಟೈಮ್). ನಾಗರಿಕ ಕಾಲ (ಸಿವಿಲ್ ಟೈಮ್) ಗ್ರೀನಿಜ್ ಮಾಧ್ಯಕಾಲಕ್ಕಿಂತ 12 ಗಂಟೆ ಮುಂದೆ ಉಂಟು. ಅಂದರೆ, ನಾಗರಿಕ ಕಾಲದಲ್ಲಿ 12 ಗಂಟೆ ಮಧ್ಯಾಹ್ನವಾಗಿರುವಾಗ ಗ್ರೀನಿಜ್ ಮಾಧ್ಯಕಾಲ 0 ಗಂಟೆ ಆಗಿರುವುದು.

ಭೌಗೋಲಿಕವಾಗಿ ವಿವಿಧ ಪ್ರದೇಶಗಳಲ್ಲಿ ವಿತರಣೆಗೊಂಡಿರುವ ರಾಷ್ಟ್ರಗಳ ನಡುವೆ ಕಾಲವಿನಿಮಯದಲ್ಲಿ ನಿರ್ದಿಷ್ಟ ಸೂತ್ರವೊಂದನ್ನು ರೂಪಿಸಲು ಗ್ರೀನಿಜ್ ಮಾಧ್ಯಕಾಲದ ಪರಿಕಲ್ಪನೆಯನ್ನು ಅಂತರಾಷ್ಟ್ರೀಯವಾಗಿ ಒಪ್ಪಿ ಬಳಕೆಗೆ ತರಲಾಗಿದೆ. ವಾಷಿಂಗ್ಟನ್ನಿನಲ್ಲಿ ನಡೆದ ಒಂದು ಸಮ್ಮೇಳನಾಂತರ ಗ್ರೀನಿಜ್ ಮಧ್ಯಾಹ್ನರೇಖೆಯನ್ನು ಅಂತರಾಷ್ಟ್ರೀಯ ಮಧ್ಯಾಹ್ನರೇಖೆ ಎಂದು ಪರಿಗಣಿಸಲಾಯಿತು (1884). ಇದನ್ನು 00 ರೇಖಾಂಶಗಳನ್ನು ಆಯ್ದು ಇದರಿಂದ ಪೂರ್ವಕ್ಕೂ ಪಶ್ಚಿಮಕ್ಕೂ 1800 ಗಳ ವರೆಗೆ ರೇಖಾಂಶಗಳನ್ನು ಗುರುತಿಸಿದರು. 1800 ಪೂ. ಮತ್ತು 1800 ಪ. ರೇಖೆಗಳೆರಡೂ ಐಕ್ಯವಾಗುತ್ತವೆ. ಗ್ರೀನಿಜ್ ರೇಖೆಯಿಂದ ಪೂರ್ವ ಪಶ್ಚಿಮ ಕಡೆಗಳೀಗೆ 71/20 ಅಗಲದ ಪ್ರದೇಶವನ್ನು 0 ಗಂಟೆಯ ಕಾಲವಲಯವೆಂದೂ ಅಲ್ಲಿಂದ ಮುಂದಕ್ಕೆ ಪೂರ್ವಾಭಿಮುಖವಾಗಿ 150ಗಳಷ್ಟು ಅಗಲದ ಪಟ್ಟಿಗಳನ್ನು ಅನುಕ್ರಮವಾಗಿ 1, 2, 3...................... 23 ಗಂಟೆಗಳನ್ನು ಗ್ರೀನಿಜ್ ಮಾಧ್ಯಕಾಲಕ್ಕಿಂತ ಮುಂದೆ ಇರುವ ಕಾಲ ವಲಯಗಳೆಂದು ಪರಿಗಣಿಸಲಾಗಿದೆ. (ನೋಡಿ- ಅಂತರರಾಷ್ಟ್ರೀಯ-ದಿನಾಂಕ-ರೇಖೆ). ಇನ್ನು ಸ್ಥಳೀಯವಾಗಿ ಆಯಾ ರಾಷ್ಟ್ರ ತನ್ನ ಸೌಕರ್ಯಕ್ಕೆ ಅನುಗುಣವಾಗಿ ಇದರಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಸಾಧ್ಯ. ಇದರ ಪ್ರಕಾರ ಭಾರತೀಯ ಮಾದ್ಯಮಕಾಲ ಗ್ರೀನಿಜ್ ಮಾಧ್ಯಕಾಲಕ್ಕಿಂತ (ಅದೇ ರೀತಿ ಭಾರತೀಯ ನಾಗರಿಕ ಕಾಲ ಗ್ರೀನಿಜ್ ನಾಗರಿಕ ಕಾಲಕ್ಕಿಂತ) 5 ಗಂ. 30 ಮಿ. ಮುಂದೆ ಇದೆ.						(ನೋಡಿ- ಕಾಲಮಾಪನ)

(ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ